ನಿಮ್ಮ ಕಂಪ್ಯೂಟರ್ ನಲ್ಲೇ ನಿಮ್ಮ ಕಣ್ಣು ಪರೀಕ್ಷೆ ಮಾಡಿಕೊಳ್ಳಬಹುದು


ನಿಮಗೆ ಕಣ್ಣಿನ ದೃಷ್ಟಿ ದೋಷ ಇದೆಯೇ? ಹಾಗಿದ್ದರೆ ಕೇವಲ 5 ನಿಮಿಷ ಕಂಪ್ಯೂಟರ್ ಮುಂದೆ ಕಣ್ಣಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಹೌದೂರೀ ಈ ಕಂಪ್ಯೂಟರಿನಿಂದಲೇ ನನಗೆ ದೃಷ್ಟಿ ದೋಷ ಕಾಡುತ್ತಿರುವುದು ಎನ್ನುವರಿಗೆ ಈ ಪರೀಕ್ಷೆ ಹೇಳಿ ಮಾಡಿಸಿದಂತಿದೆ.
Add caption
ಇಂತಹ ವಿನೂತನ ಪ್ರಯತ್ನಕ್ಕೆ ಕೈಹಾಕಿರುವುದು ಬೆಂಗಳೂರಿನ Titan Eye+ ಕಂಪನಿ. ವಿಶ್ವ ದೃಷ್ಟಿ ದಿನ ಅಂಗವಾಗಿ ಕಂಪನಿಯು ಈ 'ಸ್ವಯಂ ನೇತ್ರ ತಪಾಸಣೆ' ಕಾರ್ಯಕ್ರಮ ಆರಂಭಿಸಿದೆ. ಈ ಪ್ರೋಗ್ರಾಂನಿಂದ ಇಂಟರ್ ನೆಟ್ ಮೂಲಕ ಕಣ್ಣುಗಳನ್ನು ಪರೀಕ್ಷೆಗೆ ಒಳಪಡಿಸಲು ಕಂಪನಿ ಅವಕಾಶ ಕಲ್ಪಿಸಿದೆ. 6 ವರ್ಷ ಮೇಲ್ಪಟ್ಟವರು ಸ್ವಯಂ ನೇತ್ರ ತಪಾಸಣೆಗೆ ಅರ್ಹರು.
ಪರೀಕ್ಷೆ ಹೇಗಪ್ಪಾ ಅಂದರೆ?... ತುಂಬಾ ಸರಳ. Titan Eye+ ವೆಬ್ ಸೈಟ್ ಲಿಂಕ್ ಗೆ ಸಂಪರ್ಕ ಹೊಂದಿರಿ (ಇಲ್ಲಿ ಕ್ಲಿಕ್ ಮಾಡಿ). ಕಂಪ್ಯೂಟರ್ ಮುಂದೆ 3 ಅಡಿ ದೂರದಲ್ಲಿ ಸಮಾನಾಂತರವಾಗಿ ಕುಳಿತುಕೊಳ್ಳಿ. ಒಂದಾದ ನಂತರ ಒಂದಂತೆ ನಾಲ್ಕಾರು ಹಂತಗಳಲ್ಲಿ ಪರೀಕ್ಷೆಗಳು ನಡೆಯುತ್ತವೆ. ಪರೀಕ್ಷೆ ಮುಗಿದ ನಂತರ ರಿಸಲ್ಟ್ ಸಹ ಅಲ್ಲೇ ಕ್ಷಣಾರ್ಧದಲ್ಲಿ ಪ್ರಕಟವಾಗುತ್ತದೆ. ನಂತರ ಟೈಟಾನ್ ಕಂಪನಿಯ ಸಲಹೆ ಸೂಚನೆಗಳು ಪುಂಖಾನುಪುಂಖವಾಗಿ ಹರಿದುಬರುತ್ತದೆ. ಒಮ್ಮೆ ಟ್ರೈ ಮಾಡಿ.